ನಾನು ಕಂಡ ನೀನು

By | October 6, 2015
ನಾನು ಕಂಡ ಉಪ್ಪಿ 2
ಯೋಚನೆಯನ್ನು ಮನೆಯಲ್ಲಿಟ್ಟು
ಈ ಉಪೇಂದ್ರನ ಚಿತ್ರ
ಅನಿಸಿತು ಬಹಳ ವಿಚಿತ್ರ

ಇದರ ಸಾರಾಂಶ ಬರೆಯಲು ಆಗದು 
ಕೆಲವರಿಗೆ ಇದರ ಅರ್ಥವು ಆಗದು 
ನಾನು ನೀನು ಎಂಬ ಆಟದಲ್ಲಿ 
ಅವನ್ಯಾರು ಅನ್ನೋನು ಎಂಬುದು ತಿಳಿಯಲಿಲ್ಲ 

ನಾನೇ ನೀನಾ ಅಥವಾ ನೀನೇ ನಾನಾ 
ಈ ಗೊಂದಲದಲ್ಲಿ ಇರುವುದು ಎಲ್ಲರೋ ಅಥವಾ ಬರೀ ನಾನಾ 
ಯೋಚನೆ ಮಾಡಿ ಮಾಡಿ ಕೊನೆಗೆ 
ಅಂದುಕೊಂಡೆ ಯೋಚನೆ ಮಾಡ್ಬೇಡ ಹೀಗೆ 

ಚಿತ್ರದ ಒಂದು ಪಾತ್ರ ನಾನಾದೆ 
ನೋಡಿದಾಗ ತಿಳಿಯಲಿಲ್ಲ ಹೇಗಾದೆ 
ಹೊರಬಂದಮೇಲೆ ತಿಳಿದಿತ್ತು 
ಈ ಚಿತ್ರ ಮಾತ್ರ ಸಕ್ಕತ್ತಾಗಿತ್ತು 

ಬದುಕು ನೀ ಈ ಕ್ಷಣದಲ್ಲಿ 
ಮರೆಯದಿರು ಅದನ್ನ ನೆನ್ನೆ ನಾಳೆಯ ಗುಂಗಲ್ಲಿ 
ಹೇಳಿದಷ್ಟು ಸುಲಭವಲ್ಲ ಇದರ ಆಚರಣೆ 
ನೀನು ಅನ್ನೋನು ಮಾಡಬೇಕು ವಿಚಾರಣೆ! 

See also  ನಗುತ ನಗಿಸುತಿರು

One thought on “ನಾನು ಕಂಡ ನೀನು

  1. Pingback: My Perception of Uppi2 | So called Review - Anil Kulkarni | Blog

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.