Category Archives: Kannada

Ugliest language in India

Ugliest language in India? – I don’t think it exists. Today, I see the internet having lot of articles about how Google displayed an answer to the above question. Google’s answer was “Kannada” which happens to be my native language. Many people had already reported it and Google also offered an apology. The result now are about all articles about how google made this mistake.

Seattle and Kannada

During May 2018, the way Sahyadri Kannada Sangha celebrated Ugadi festival, inspired my wife to do a painting. It describes Seattle and Kannada in togetherness. I fell in love with that and below is the link where you can find that: I was wondering when will I be inspired so much to write something in… Read More »

ಸಮಯವೇ ನೀನೇ ಹೇಳು

ಮುಗುಳುನಗೆ ಸಿನೆಮಾದ ಹಾಡಿನಿಂದ ಪ್ರೇರಿತನಾದ ನಾನು , ನನ್ನ ಅಪ್ಪ ಅಮ್ಮ ಸಿಯಾಟಲ್ ನಿಂದ ಮರಳಿ ಭಾರತಕ್ಕೆ ತೆರಳಿದಮೇಲೆ ಈ ಸಾಲುಗಳನ್ನು ಬರೆದೆ. ಸಮಯವೇ ನೀನೇ ಹೇಳೆಂದು. ಅವರು ತೆರಳಿದ ಕೆಲವೇ ದಿನಗಳಲ್ಲಿ ನಮ್ಮ (ಅಂದರೆ ನಾನು , ಹೆಂಡತಿ ಮತ್ತು ಮಗು ) ಭಾರತದ ಪ್ರವಾಸ ಶುರು . ಒಂದು ತಿಂಗಳ ನಂತರ ತಿರುಗಿ ಸಿಯಾಟಲ್ಗೆ ಬಂದಮೇಲೆ , ಈ ಸಾಲುಗಳು ಬಹಳ ಸೂಕ್ತ ಅನಿಸಿದವು , ಅದಕ್ಕೆ ಹಾಡಾಗಿ ಬದಲಾಯಿಸಿ record ಕೂಡ ಮಾಡಿದೆ.… Read More »

ಹೇಳದೇ ಉಳಿದ ಮಾತುಗಳು

ಹೇಳದೇ ಉಳಿದ ಮಾತುಗಳು ಬರೆಯದೇ ಉಳಿದ ಪದಗಳು ಜೋಡಿಸಿ ಬರೆಯಲೇ ನಾಕು ಸಾಲು ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು ಧರಿಸದೇ ಹರಿದ ಬಟ್ಟೆಗಳು ಒಗೆಯದೇ ಹೋದ ಕಲೆಗಳು ಜೋಡಿಸಿ ಹೊಲಿಯಲೇ ನಿನಗೊಂದು ಸೀರೆ ಬರೆದು ಅದರಮೇಲೆ ತಂಪಾದ ಯಳನೀರೆ ಹೊಡೆಯದೇ ಬಿದ್ದ ಏಟುಗಳು ತಿಳಿಯದೇ ಅದ ನೋವುಗಳು ಮರೆತು ಮುಂದೆ ಸಾಗೋಣವೆ ಪ್ರೀತಿಯೇ ಮೇಲು ಎಂದು ಸಾರೋಣವೆ ತಿಳಿಯದೇ ಊಹಿಸಿದ ಯೋಚನೆಗಳು ಯೋಚಿಸದೇ ನುಡಿದ ಬೈಗುಳಗಳು ಬದಿಗಿಟ್ಟು ಮತ್ತೆ ನಕ್ಕರೆ ಚೆನ್ನ ಆ ನಗು ಹಬ್ಬಿಸಿದರೆ ಎಲ್ಲರ ಬಾಳು ಚಿನ್ನ! Anil Kulkarni | Blog

ಅಕ್ಷರಸ್ತ

ಲೇಖನಿ ಹಿಡಿದವರೆಲ್ಲ ಲೇಖಕರಲ್ಲ ಕತ್ತಿ ಹಿಡಿದವರೆಲ್ಲ ವೀರರಲ್ಲ ಕತ್ತಿಗಿಂತ ಹೆಚ್ಚು ಹಾನಿ ಮಾಡಬಹುದು ಲೇಖನಿ ಮಾತಿನಲ್ಲೇ ಮಾನಭಂಗ ಮಾಡುವ ಲೇಖನಿ ಪುಸ್ತಕ ಪ್ರಿಯನಾಗು ನೀ ವಿಚಾರಗಳ ತಿಳಿಯಲು ಕೈಯಲ್ಲಿ ತೆಗೆದುಕೋ ಲೇಖನಿ ನಿನ್ನ ವಿಷಯಗಳ ಸಾರಲು ಮಾತಿನಲ್ಲಿ ಮನ ಗೆಲ್ಲಬೇಕು ಹಿಂಸೆಯಿಂದ ದೇಶ ನಾಶವಗಬೇಕೆ?ನಿನ್ನ ಸಹಿಯಲ್ಲೇ ಸಿಹಿ ಇರಬೇಕು ಮಾತಿನಲ್ಲಿ ಮನ ಮುರಿಯಬೇಕೆ?ವಿದ್ಯೆಗಿಂತ ದೊಡ್ಡ ಶಸ್ತ್ರ ಇಲ್ಲ ಬಂದೂಕೆಂಬ ಅಸ್ತ್ರ ಬೇಕಿಲ್ಲ ಬನ್ನಿ ಆಗುವ ಎಲ್ಲರು ಅಕ್ಷರಸ್ತ ಮಾಡುವ ನಮ್ಮ ಮನ, ಮನೆ ಹಾಗು ದೇಶವನ್ನು ಸ್ವಸ್ಥ!   Anil Kulkarni | Blog

ನಗುತ ನಗಿಸುತಿರು

ನನ್ನೊಳಗಿರುವ ನೋವುಗಳನ್ನು ಹೇಳಿಕೊಳ್ಳಬೇಕ ಅಥವಾ ಹೇಳದೇ ಉಳಿಸಿಕೊಳ್ಳಬೇಕ ಹೇಳಿದರೇನಾಗಬಹುದು ಹೇಳದಿದ್ದರೇನಾಗಬಹುದು ಉತ್ತರಗಳ ನಾನರಿಯೆ ಈ ಯೋಚನೆಯು ಸರಿಯೇ ಹೇಗೆ ಹಂಚಿಕೊಳ್ಳಲಿ ಆ ನೋವುಗಳನ್ನು ಹೇಗೆ ಸಾರಲಿ ನಾ ಅವರೊಡನೆ  ದ್ವೇಷವನ್ನು ಹೇಗೆ ಮರೆಯಲಿ ಆ ಸುಂದರ ದಿನಗಳನ್ನು ಹೇಗೆ ಅಡಗಿಸಲಿ ನನ್ನೊಳಗಿರುವ ಮಗುವನ್ನು ನೋವಿಗಿಂತ ನಲಿವೇ ಬಲು ಚಂದ ನಲಿವಿನಿಂದ ಅರಳಿತು ಎಲ್ಲರ ಮೊಗದ ಅಂದ ನನ್ನೊಳಗೆ ಕಂಡೆ ಒಂದು ಪುಟ್ಟ ಕಂದ ನನ್ನ ನೋಡಿ ಹೀಗೆ ನಗುತ ನಗಿಸುತಿರು ಎಂದವನೆಂದ!!  Anil Kulkarni | Blog

ಇನ್ಯಾರು ಸಿಗೋಲ್ಲ

ಬಾನಲಿ ಬಂದು ನಿಂದ ಚಂದಿರ ಅವಳು ಕೇಳಿದಳು ನನಗೆ ಏನು ತಂದಿರ ಪಿಸುಗುಟ್ಟೆ ಅವಳ ಕಿವಿಯ ಹತ್ತಿರ ಅವಳ ಪ್ರಶ್ನೆಗೆ ಉತ್ತರ ನಾಚಿ ಓಡಿಹೋದಳು ಆಕೆ ಈ ಪ್ರಶ್ನೆಗೆ ಉತ್ತರ ನನ್ನಲ್ಲಿಲ್ಲ ಏಕೆ ಈ ಸನ್ನೆಯನ್ನು ನಾ ತಿಳಿಯಬೇಕೆ ಹೇಗೆ ತಿಳಿಯಲಿ ಅವಳ ಮನಸಿನ ಬಯಕೆ ಅವಳ ಬಯಕೆಯಂತೆ ನುಡಿವ ಪ್ರೇಮಿ ನಾನಲ್ಲ ಸುಳ್ಳನ್ನು ನಿಜಮಾಡಿ ಹೇಳುವವ ನಾನಲ್ಲ ನನ್ನ ಬಳಿಯೇ ನೀ ಬಾ ಎಂದು ನಾ ಕೇಳೊಲ್ಲ ಆದರು ನನ್ನ ಹಾಗೆ ನಿನಗೆ ಇನ್ಯಾರು ಸಿಗೋಲ್ಲ! Anil Kulkarni | Blog

ಬಣ್ಣಗಳ ಮಧ್ಯೆ

ಬದುಕು ನೀ ಬಣ್ಣಗಳ ಮಧ್ಯೆ ಬಣ್ಣದ ಮಾತುಗಳಾಡಿ ಅವಳ ಮನಸ ಕದ್ದೆ ಬಣ್ಣಗಳ ಮೂಲಕ ವರ್ಣಿಸಿ ನನ್ನ ಭಾವನೆಗಳ ಭಾವನೆಗಳ ಮೂಲಕ ತಿಳಿಸಿ ನನ್ನ ಮಾತುಗಳ ಕಾತುರದಿ ಕಾದಿರುವೆ ಆ ಬಣ್ಣದ ಚೆಲುವೆಗೆ ಮನಸೋತಿ ಅವಳ ಕಣ್ಣಿನ ಕಾಮನಬಿಲ್ಲಿಗೆ !!! Anil Kulkarni | Blog

ನಿನ್ನ ಆಟ

ನಿನ್ನ ಆಟಗಳನ್ನು ಬಲ್ಲವರು ಯಾರು ಅದ ತಿಳಿಯಬಲ್ಲರಿಲ್ಲ ಇಲ್ಯಾರು ನಿನ್ನ ನಿರ್ಧಾರಕೆ ತಲೆಬಾಗಬೇಕು ನಾವು ಕರೆಯದೇ ಬಂದ ಸೌಭಾಗ್ಯವಿದು ಸಾವು ಎಲ್ಲಿಯೋ ಒಂದು ಮರಣ ಮತ್ತೆಲ್ಲೋ ಒಂದು ಜನನ ಬಲು ಕ್ರೂರವೆನಿಸಿದರೂ ಈ ಆಟ ಅದರೊಳಗೆ ಅಡಗಿಸಿದೆ ಒಂದು ಪಾಠ ಎಲ್ಲರಿಗೂ ಒಳ್ಳೆಯ ಬುಧ್ಧಿ ಕೊಟ್ಟೆ ಅದರೊಳಗೆ ಕಲ್ಮಶವ ಇಟ್ಟೆ ನೀ ಸೃಷ್ಟಿಸಿದೆ ಜೀವನವೆಂಬ ಈ ಚಲನಚಿತ್ರ  ನೀನೆ ನಾಯಕ, ಖಳನಾಯಕನದು ನಿನದೆ ಪಾತ್ರ ನಿನ್ನ ಇರುವಿಕೆಯನ್ನೇ ಪ್ರಶ್ನಿಸಿದವರು ನಾವು ನಿನ್ನನೇ ಜಪಿಸುವೆವು ಆದಾಗ ನೋವು ನಿನ್ನ ಮಾಯೆಗಳು ಹಲವಾರು ಈ ನಿನ್ನ ಆಟದ ಮುಂದಿನ ಬಲಿ ಇನ್ಯಾರು? Anil Kulkarni | Blog