ನಿನ್ನ ಆಟ
ನಿನ್ನ ಆಟಗಳನ್ನು ಬಲ್ಲವರು ಯಾರು ಅದ ತಿಳಿಯಬಲ್ಲರಿಲ್ಲ ಇಲ್ಯಾರು ನಿನ್ನ ನಿರ್ಧಾರಕೆ ತಲೆಬಾಗಬೇಕು ನಾವು ಕರೆಯದೇ ಬಂದ ಸೌಭಾಗ್ಯವಿದು ಸಾವು ಎಲ್ಲಿಯೋ ಒಂದು ಮರಣ ಮತ್ತೆಲ್ಲೋ ಒಂದು ಜನನ ಬಲು ಕ್ರೂರವೆನಿಸಿದರೂ ಈ ಆಟ ಅದರೊಳಗೆ ಅಡಗಿಸಿದೆ ಒಂದು ಪಾಠ ಎಲ್ಲರಿಗೂ ಒಳ್ಳೆಯ ಬುಧ್ಧಿ ಕೊಟ್ಟೆ ಅದರೊಳಗೆ ಕಲ್ಮಶವ ಇಟ್ಟೆ ನೀ ಸೃಷ್ಟಿಸಿದೆ ಜೀವನವೆಂಬ ಈ ಚಲನಚಿತ್ರ ನೀನೆ ನಾಯಕ, ಖಳನಾಯಕನದು ನಿನದೆ ಪಾತ್ರ ನಿನ್ನ ಇರುವಿಕೆಯನ್ನೇ ಪ್ರಶ್ನಿಸಿದವರು ನಾವು ನಿನ್ನನೇ ಜಪಿಸುವೆವು ಆದಾಗ ನೋವು ನಿನ್ನ ಮಾಯೆಗಳು ಹಲವಾರು ಈ ನಿನ್ನ ಆಟದ ಮುಂದಿನ ಬಲಿ ಇನ್ಯಾರು? Anil Kulkarni | Blog