Category Archives: Kannada

ನಮ್ಮ ನವ ಪಯಣ

ಬಹಳ ದಿನಗಳಿಂದ ಕಾತುರದಿ ಕಾದಿರುವ ದಿನ ಬರಲಿದೆ ಇನ್ನು ಕೆಲವು ಗಂಟೆಗಳಲ್ಲಿ ಹೊಸ ಆಸೆಗಳನ್ನು ಕಾಣುತಿಹೆ ನನ್ನ ಮನ ಬರುವೆಯ ಮತ್ತೆ ನನ್ನ ಸುಂದರ ಸ್ವಪ್ನಗಳಲ್ಲಿ ಶುರು ಮಾಡೋಣ ನಮ್ಮ ನವ ಪಯಣ ಬಾರದಿರಲಿ ಪರರು ನಮ್ಮ ನಡವೆ  ಅದಕೆಂದೆ ಬರೆದಿರುವೆ ಈ ಕವನ ಎಲ್ಲ ನೆನಪುಗಳನ್ನು ಮರೆವೆ ಬೇಗ ಬರಲಿದೆ ಆ ಸುದಿನ ವಿಮಾನದಲ್ಲಿ ಕುಳಿತುಕೊಂಡು ಹೋಗೋಣ ಹೀಗೆ ಇರಲಿ ನಮ್ಮ ಪ್ರತಿದಿನ ನೀ ನನ್ನ ಪಕ್ಕದಲಿ, ಎದುರಿಗೆ ಗಗನಸಖಿಯ ನೋಡೋಣ  Anil Kulkarni | Blog

ನಾ ಹೋಗುವ ದಾರಿಯಲಿ

ನಾ ಹೋಗುವ ದಾರಿಯಲಿ ಕಂಡೆ ತಿರುವೊಂದನು ಮೊದಲನೇ ಭೇಟಿಯಲಿ ಕಂಡೆ ಚಂದದ ಮೊಗವಂದನು ಆ ತಿರುವಲೇ ಕುಳಿತಿಹೆ ಇನ್ನು ಕಾಯುತ ಆ ಮೊಗದ ನಗುವ ಎಷ್ಟು ಬರೆದರೂ ಬರೆಯಲೇಬೇಕಿನ್ನು ಹೇಗೆ ವರ್ಣಿಸಲಿ ಅವಳ ಚೆಲುವ ದೂರದಲ್ಲಿ ಅವಳು ನಿಂತಹಾಗೆ ಬೇಲೂರು ಹಳೇಬೀಡಿನ ಶಿಲೆಯಂತೆ ನನ್ನನ್ನೇ ನೋಡುತಿರುವಹಾಗೆ ಇವನೇಕೆ ಇಲ್ಲಿ ಬಂದ ಎನ್ನುವಂತೆ ಅವಳ ಹೆಜ್ಜೆ ಗುರುತು ನಾ ನೋಡಿದೆ ಪಕ್ಕದಲ್ಲೇ ನನ್ನ ಹೆಜ್ಜೆಯನಿಟ್ಟೆ ಇಂಪಾದ ಗೆಜ್ಜೆಯ ಸದ್ದು ನಾ ಕೇಳಿದೆ ಅವಳಲ್ಲೇ ನನ್ನ ಮನಸನಿಟ್ಟೆ  ಇಂದು ನೆನೆಯುತಾ ಆ ದಿನಗಳನ್ನು ಮರೆಯಲಾರದ ಕ್ಷಣಗಳವು ಸಾವಿರಾರುಬರೆದಿಹೆ ಈ ನಾಕು ಸಾಲುಗಳನ್ನು ನಿಂತು ಅವಳ ಹೂಮಾಲೆ ಭರಿತ ಚಿತ್ರದೆದುರು  Anil Kulkarni | Blog

ನನ್ನ ಉಳಿಸುವೆಯ ಇನಿಯ?

ನಾ ಏನ ಮಾಡಿದೆ ನಿನಗೆ ನೀ ಹೀಗೇಕೆ ಮಾಡಿದೆ ಎನಗೆ ಬಲವಂತ ಮಾಡದ ಸಂಬಂಧವದು ನೀ ಏಕೆ ನನ್ನ ಪ್ರೀತಿಯಿಂದ ಕರೆದದು?ಪ್ರೀತಿ ಎನ್ನಲೇ ಅದನ್ನ ಅಥವಾ ಬೇರೇನಾದರು ತಿಳಿಯಲ ಕಂಡೆ ನಾನು ನಿನ್ನ ಕಣ್ಣಮಧ್ಯೆ ಸಿಲುಕಿಕೊಂಡೆ ನಾ ಸಂಬಂಧಗಳ ಸುಳಿಯ ಈ ಪ್ರೀತಿ ಎಂಬುದು ನಿಜವೇ ಅಥವಾ ನಮ್ಮ ಬಾಳಿನ ಸಜವೇ ಇದು ಸತ್ಯ ಅಸತ್ಯಗಳ ಆಟ ಅಥವಾ ನಾನು ನಿನಗೆ ಕೊಟ್ಟ ಕಾಟ?ಪರನಾರಿ ಬಯಸಿದವನಲ್ಲ ನಾ ನಿನ್ನ ಕಂಡ ಕ್ಷಣದಿಂದ ನಾ ಬಯಸಿದೆ ನಿನ್ನೊಬ್ಬಳನೆ ಬಯಸದೆ ತಂದೆ ನೀ ನೋವು ಕಣೇ ನನ್ನ ಪ್ರೀತಿಯಲಿ ಏನಿತ್ತು ಕೊರತೆ ಎಲ್ಲಿ ತಪ್ಪಿತು ನನ್ನ ನಡತೆ ಏಕೆ ನೀ ನನ್ನ ಇರುವಿಕೆಯ ಮರೆತೆ ಸರಿ… Read More »

ಅಜ್ಜಿಯ ಕಥೆಗಳು

ಹಿಂತಿರುಗಿ ನನ್ನ ಬಾಲ್ಯದತ್ತ ನಾನು ನೋಡಿದಾಗ, ಬಹಳ ನೆನಪುಗಳು ಬರುವವು. ಅದರಲ್ಲಿ ಅತಿ ಹೆಚ್ಚು ಪ್ರಿಯವಾದುದರಲ್ಲಿ ಒಂದು ಕಥೆಗಳು. ಈ ಕಥೆಗಳ ಪಯಣ ನನಗೆ ಬಲು ಚಿಕ್ಕ ವಯಸ್ಸಿನಿಂದಲೇ ಶುರುವಾಯಿತು. ಕಾರಣ ನನ್ನ ಅಜ್ಜಿ ನಂತರ ನನ್ನ ಅಮ್ಮ. ಈಗ ನನ್ನ ಅಣ್ಣನ ಮಗನನ್ನು ಹಾಗು ನನ್ನ ತಾಯಿಯನ್ನು ಅಂದರೆ ಅವನ ಅಜ್ಜಿಯನ್ನು ನೋಡಿದಾಗ ನನಗೆ ನನ್ನ ಬಾಲ್ಯದ ನೆನಪು ಕಾಡುತ್ತದೆ. ಮೊಮ್ಮಗ ಹಾಗು ಅಜ್ಜಿಯ ಮಧ್ಯೆ ಇರುವ ಸಂಬಂಧ ತುಂಬ ವಿಭಿನ್ನ, ಊಹಿಸಿಕೊಳ್ಳಲಾಗದಷ್ಟು. ಅವರಿಬ್ಬರ ಮಧ್ಯೆ… Read More »

ನಾ ಬರೆಯುವ ಕವನಗಳನು

ಯತ್ನಿಸುವೆ ನಾ ಬರೆಯಲು ಒಂದು ಕವಿತೆ  ಆಗಲಿ ಇದು ಒಂದು ಚಿತ್ರಗೀತೆ ಇರುವುದೀ ಆಸೆ ಬಹುದಿನಗಳಿಂದ ನಾನಾಗಿರುವೆ ಕವಿ ನಿನ್ನ ನೆನಪಿನಿಂದ ಅ ಆ ಇ ಈ ಅಕ್ಷರಗಳ ಜೋಡಿಸಿ ನಾ ಬರೆದೆಪದಗಳ ಈ ಉಯ್ಯಾಲೆ ಇದ ಹಾಡುತ ನಾ ನಿನಗೆ ನೀಡಿದೆ ನನ್ನ ಪ್ರೀತಿಯ ಸುರಿಮಾಲೆ ಈ ಉಯ್ಯಾಲೆಯ ತೂಗುತ ತೋರುವೆ ನಿನಗೆ ಬಾನಲಿರುವ ಬೆಳಕಿನ ಚುಕ್ಕಿಗಳನು ನಿನ್ನ ಗುಂಗಲ್ಲೇ ತೇಲಾಡುತ ನಿನಗಾಗೆ ಮುಡಿಪಿಡುವೆ ನಾ ಬರೆಯವ ಕವನಗಳನು   Anil Kulkarni | Blog

ಬರೆಯಲೇ ನಾನೊಂದು ಕವಿತೆ

ಬರೆಯಲೇ ನಾನೊಂದು ಕವಿತೆ ಈ ಬೆಳದಿಂಗಳ ಬೆಳಕಿನಲಿ ನಿನ್ನ ಗುಂಗಲ್ಲೇ ಪದಗಳ ನಾ ಮರೆತೇ ಪ್ರೀತಿಯ ಬಣ್ಣವಿದೆ ಈ ಪದಗಳಲಿ ನಿನ್ನ ಗೆಜ್ಜೆಯ ಸವಿನಾದ ಕೇಳುತಲೇ  ಕುಳಿತಿರುವೆ ಮಾತುಗಳು ನಿನ್ನವು ಬಲು ಇಂಪಾದ ಈ ಪದಗಳಲ್ಲೇ ನಿನ್ನ ನೆನೆದಿರುವೆ ನಿನ್ನ ನಡುವಿನ ನೃತ್ಯ ನೆನೆಯುತಲೇ ನಾ ಹಾಡುವೆ ನಿನಗಿಂತ ಚಂದ ಯಾರಿಲ್ಲ, ಇದು ಸತ್ಯ ನೀ ಮರೆಯಾಗಿ, ಎಲ್ಲಿರುವೆ? Anil Kulkarni | Blog

ನನ್ನ ಬಣ್ಣಿಸಿದವರು ಹಲವರು

ಈ ಕವಿತೆಯನ್ನು ಅಂತರಾಷ್ಟ್ರೀಯ ಮಹಿಳ ದಿನದಂದು ನನ್ನ ಗೆಳತಿ ಬರೆದದ್ದು. ನಾನು ಕನ್ನಡದಲ್ಲಿ ಲೇಖನಗಳನ್ನು ಬರೆದದ್ದನ್ನು ಕಂಡು ‘Guest Post’ ಆಗಿ ಇದನ್ನು ನನಗೆ  ಕಳುಹಿಸಿದರು. ಈ ಕವಿತೆಯನ್ನು ಓದಿದ ನನಗೆ ಇದನ್ನು ನನ್ನ ಬ್ಲಾಗ್-ನಲ್ಲಿ ಹಾಕದೆ ಇರಲು ಅಸಾಧ್ಯವೆಂದೆನೆಸಿತು. ಕೂಡಲೆ ಇದನ್ನು ಕನ್ನಡದಲ್ಲಿ  ಟೈಪ್ ಮಾಡಿದೆ. ಟೈಪ್ ಮಾಡಿದ ಮೇಲೆ ತಡವೇಕೆ ಎಂದು ಬಹಿರಂಗಪಡಿಸಿದೆ. ಇದನ್ನು ಓದಿದವರು ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಟಿಪ್ಪಣಿ(comment ) ಮೂಲಕ ಕಳುಹಿಸಿ. ನನ್ನ ಸ್ನೇಹಿತೆಯ ಬ್ಲಾಗ್-ನ ಲಿಂಕ್ : rashmiandiನನ್ನ ಬಣ್ಣಿಸಿದವರು ಹಲವರುಒಬ್ಬನಂದ,… Read More »

ನನ್ನ ಬಗ್ಗೆ (About Me)

ನಾನಿರುವುದು ಏಕೆ ಹೀಗೆ  ಅದ ತಿಳಿಯುವುದು ನಾ ಹೇಗೆ  ನನ್ನೊಳಗಿರುವ ಭಾವನೆಗಳು ಹಲವು  ಆದರೆ ಹೇಳ ಬಲ್ಲೆ ಬರೀ ಕೆಲವು  ಇದು ನನ್ನ ಬ್ಲಾಗ್ ನಾ ‘About me’ ಅಂಕಣಕ್ಕೆಂದೆ ನಾನು ಯಾವಾಗಲೊ ಬರೆದಿಟ್ಟ ನಾಕು ಸಾಲು. ಇದನ್ನು ನಮೂದಿಸುವ ಕಾಲ ಇಂದು ಒದಗಿಬಂದಿದೆ. ಸ್ನೇಹಿತರೆ ಕನ್ನಡದಲ್ಲಿ ಬರೆಯುವುದಷ್ಟೇ ನನ್ನ ಉದ್ದೇಶವಲ್ಲ, ನಾಕು ಜನ ತಿಳಿದವರಿಂದ  ಇನ್ನು ಹೆಚ್ಚು ಒಳ್ಳೆಯ ಕನ್ನಡವನ್ನು ಕಲೆಯಲು ಹಾಗು ನನ್ನ ಕನ್ನಡ ವ್ಯಾಕರಣವನ್ನು ಸರಿಪಡಿಸಿಕೊಳ್ಳಲು. ಅದೆಲ್ಲಕೂ ಮಿಗಿಲಾಗಿ ನನ್ನ ಪದ ಘೋಷವನ್ನು ಹೆಚ್ಚಿಸಿಕೊಳ್ಳಲು.  Anil Kulkarni… Read More »

ಕನ್ನಡ ಪ್ರೇಮಿ

ನನ್ನೊಳಗಿನ  ಕನ್ನಡದ ಪ್ರೇಮಿ ಕನ್ನಡದಲ್ಲಿ ಬರೆಯಲು ಹೇಳಿದ ಅದ ನಾನು ಕೇಳಿ ಗೀಚಿದೆ ಈ ನಾಕು ಸಾಲು ಹೇಗೆ ಅನಿಸಿತೋ ನಂಗೆ ಗೊತ್ತಿಲ್ಲ, ಆದರೆ ಇಂದಿನಿಂದ ಕನ್ನಡದಲ್ಲೂ ಬ್ಲಾಗ್ ಬರೆಯಲು ಆರಂಭಿಸಲು ಎಲ್ಲಿಂದಲೋ ನನ್ನ ಮನಸ್ಸಿಗೆ ಅನಿಸಿತು. ಬಹುಷಃ ಅದು ನನ್ನೊಳಗಿನ ಕನ್ನಡ ಪ್ರೇಮಿಯ ಕೂಗಿರಬೇಕು. ಆ ಕೂಗಿಗೆ ಸ್ಪಂದಿಸಿ ನನ್ನ ಮೊದಲ ಲೇಖನವನ್ನು ಇಂದೇ ಬರೆದೆ. ಚಿಕ್ಕದಾದರೂ ಬರೆಯಲು ಶುರು  ಮಾಡಿದೆಯಲ್ಲ, ಅದೇ ಒಂದು ಸಂತಸದ ವಿಶಯ ನನಗೆ. ಮರೆತುಹೋದ ಕನ್ನಡ ಬರೆವಣಿಗೆಯನ್ನು ಗೊಗಲ್ ಸಹಾಯದಿಂದ ಪುನರ್ಜನ್ಮ ಕೊಟ್ಟೆ. ಈಗಾಗಲೆ ಬರೆದಿರುವ… Read More »