
ಸಾಧನೆ
ಏನೋ ಒಂದು ಸಾಧನೆ ಮಾಡಿರುವ ಭಾವನೆಯಲ್ಲಿ ಸಿಯಾಟಲ್ ನ ಬೆಲ್ವ್ಯು ನಗರದ ಸ್ಟಾರ್ಬಕ್ಸ್ ಛಾ ಅಂಗಡಿ ಯಲ್ಲಿ ಕುಳಿತು ನಾಕು ಡಾಲರ್ ಕೊಟ್ಟು ಛಹ ಕುಡಿಯುತ್ತಿರುವಾಗ, ಸಾಮಾಜಿಕ ಅಂತರ್ಜಾಲದಲ್ಲಿ ಭಾರತದಲ್ಲಿರುವ ಕುಟುಂಬದವರಿಂದ ಬಂದ ಫೋಟೊಗಳನ್ನು ಕಂಡು, ಸಾಧನೆಯ ಭಾವನೆ ಅಲ್ಲೇ ಮಣ್ನಾಯಿತು. ಕೆಲ ಕಾಲ ದೀರ್ಘ ಆಲೋಚನೆಯಲ್ಲಿ ಕುಳಿತು, ಆ ಫೋಟೊಗಳನ್ನೇ ಮತ್ತೆ ಮತ್ತೆ ನೋಡುತ್ತಾ , ಹೇಳಲಾಗದ ಮನಸ್ಥಿತಿಗೆ ತಲುಪಿ ಬೇರೆ ಏನನ್ನೂ ಮಾಡಲಾಗದ ಸಮಯದಲ್ಲಿ ಮುಂದಿಟ್ಟಿರುವ ಲ್ಯಾಪ್ಟಾಪ್ ನಲ್ಲಿ ಬಂದ ಸಂದೇಶವೊಂದು ಹೀಗಿತ್ತು, ‘Anil, can we please connect over call to discuss about your suggested approach. It sounds good’.
ಮರುಕ್ಶಣವೇ, ಆ ಫೋಟೊಗಳು ತುಂಬಿರುವ ಜಂಗಮವಾಣಿಯನ್ನು ಜೇಬಿನಲ್ಲಿಟ್ಟುಕೋಂಡು, ಅದರ ಜೊತೆ ಆ ಕುಟುಂದವರ ಮೇಲೆ ಇರುವ ಪ್ರೀತಿಯನ್ನು ಹಾಗೆಯೇ ಬಚ್ಚಿಟ್ಟು ಇನ್ನೊಂದು ಸಾಧನೆಯ ಮೆಟ್ಟಲೇರಲು ಹೊರಟೆ.
ಅದೇ ಹೇಳುತ್ತಾರಲ್ಲಾ,
“ಇರುವುದೆಲ್ಲವ ಬಿಟ್ಟು , ಇರದುದರ ಕಡೆಗೆ ದುಡಿವುದೇ ಜೀವನ “.