ಮುಗುಳುನಗೆ ಸಿನೆಮಾದ ಹಾಡಿನಿಂದ ಪ್ರೇರಿತನಾದ ನಾನು , ನನ್ನ ಅಪ್ಪ ಅಮ್ಮ ಸಿಯಾಟಲ್ ನಿಂದ ಮರಳಿ ಭಾರತಕ್ಕೆ ತೆರಳಿದಮೇಲೆ ಈ ಸಾಲುಗಳನ್ನು ಬರೆದೆ. ಸಮಯವೇ ನೀನೇ ಹೇಳೆಂದು.
ಅವರು ತೆರಳಿದ ಕೆಲವೇ ದಿನಗಳಲ್ಲಿ ನಮ್ಮ (ಅಂದರೆ ನಾನು , ಹೆಂಡತಿ ಮತ್ತು ಮಗು ) ಭಾರತದ ಪ್ರವಾಸ ಶುರು . ಒಂದು ತಿಂಗಳ ನಂತರ ತಿರುಗಿ ಸಿಯಾಟಲ್ಗೆ ಬಂದಮೇಲೆ , ಈ ಸಾಲುಗಳು ಬಹಳ ಸೂಕ್ತ ಅನಿಸಿದವು , ಅದಕ್ಕೆ ಹಾಡಾಗಿ ಬದಲಾಯಿಸಿ record ಕೂಡ ಮಾಡಿದೆ. ಆದರೆ ಸದ್ಯಕ್ಕೆ ಈ ಅಂಚೆಯಲ್ಲಿ ಸಾಲುಗಳನ್ನ ಮಾತ್ರ ಹಾಕುತ್ತಿರುವೆ . ಮುಂದೆಂದಾದರು ಹಾಡನ್ನು ಸಹ ಅಪ್ಲೋಡ್ ಮಾಡುವೆ.
ಸಮಯವೇ ನೀನೇ ಹೇಳು
ಸಮಯವೇ ನೀನೇ ಹೇಳು
ನಿಲ್ಲಲಾಗದ ಅತಿವೇಗವ
ನಿನ್ನಿಂದ ನಾ ಕಲಿತೆ
ಯಾಕಾಗಿ ನೀ ಹೀಗೋಡುವೆ
ಈ ಕ್ಷಣದಲೇ ನಾ ನಿಂತೆ
ಸೋತಿರುವೆ ನಾ ಈ ಓಟವ
ಗೆಲ್ಲುವುದು ನೀನೆ ತಾನೆ
ಕ್ಷಣವೊಂದು ಬೇಕು ನನಗೆ
ಅರೆ ಘಳಿಗೆ ನಿಲ್ಲು ಈಗೆ
ಇಷ್ಟೊಂದು ವೇಗವಾಗಿ
ಓಡಿದರೆ ಹೇಗೆ?
ಸಮಯವೇ ನೀನೇ ಹೇಳು
ಸಮಯವೇ ನೀನೇ ಹೇಳು
ಎಲ್ಲರಿರುವ ವೇಳೆಯಲ್ಲಿ
ನೀ ಯೇಕೆ ಜೊತೆಬಿಡುವೆ
ಕ್ಷಣದಲ್ಲಿಯಾ ನನ್ನ ಆಸೆಯಾ
ಬಂಧಿಸಲು ನೀ ಯಾರು
ನೀ ಓಡುವ ಅತಿವೇಗವ
ಖಂಡಿಸಲು ನಾ ಯಾರು
ನೋವಲ್ಲಿಯು ನಲಿವಲ್ಲಿಯು
ನಿಂತು ಬಿಡು ಸ್ವಲ್ಪ ಹೊತ್ತು
ಮನದಲ್ಲಿ ಬಂದಾ ಕನಸಿಗೆ
ಚುಕ್ಕಿ ಇಡುವ ಆಸೆಯೆ ನಿನಗೆ
ನಿಂತು ಬಿಡು ನನ್ನ ಜೊತೆಗೆ
ಓಡಬೇಡ ಹೀಗೆ
ಸಮಯವೇ ನೀನೇ ಹೇಳು
ಸಮಯವೇ ನೀನೇ ಹೇಳು
ಎಲ್ಲರಿರುವ ವೇಳೆಯಲ್ಲಿ
ನೀ ಯೇಕೆ ಜೊತೆಬಿಡುವೆ