ಇನ್ಯಾರು ಸಿಗೋಲ್ಲ

By | August 18, 2014
ಬಾನಲಿ ಬಂದು ನಿಂದ ಚಂದಿರ 
ಅವಳು ಕೇಳಿದಳು ನನಗೆ ಏನು ತಂದಿರ 
ಪಿಸುಗುಟ್ಟೆ ಅವಳ ಕಿವಿಯ ಹತ್ತಿರ 
ಅವಳ ಪ್ರಶ್ನೆಗೆ ಉತ್ತರ 

ನಾಚಿ ಓಡಿಹೋದಳು ಆಕೆ 
ಈ ಪ್ರಶ್ನೆಗೆ ಉತ್ತರ ನನ್ನಲ್ಲಿಲ್ಲ ಏಕೆ 
ಈ ಸನ್ನೆಯನ್ನು ನಾ ತಿಳಿಯಬೇಕೆ 
ಹೇಗೆ ತಿಳಿಯಲಿ ಅವಳ ಮನಸಿನ ಬಯಕೆ 

ಅವಳ ಬಯಕೆಯಂತೆ ನುಡಿವ ಪ್ರೇಮಿ ನಾನಲ್ಲ 
ಸುಳ್ಳನ್ನು ನಿಜಮಾಡಿ ಹೇಳುವವ ನಾನಲ್ಲ 
ನನ್ನ ಬಳಿಯೇ ನೀ ಬಾ ಎಂದು ನಾ ಕೇಳೊಲ್ಲ 
ಆದರು ನನ್ನ ಹಾಗೆ ನಿನಗೆ ಇನ್ಯಾರು ಸಿಗೋಲ್ಲ!
READ  ನಾ ಬರೆಯುವ ಕವನಗಳನು

4 thoughts on “ಇನ್ಯಾರು ಸಿಗೋಲ್ಲ

  1. anitha laks

    i am sure all of us can relate to something like this in our lives.. keep it up anil !!! beginning to like all your posts now.

    Reply

Leave a Reply

Your email address will not be published. Required fields are marked *